ಮಿಸ್ಟರ್ 420 - 2012 ರ ಕನ್ನಡ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು, ಗಣೇಶ್ ಮತ್ತು ಪ್ರಣಿತಾ ಸುಭಾಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದು ಸಂದೇಶ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮತ್ತು ಆರ್.ಗಿರಿ ಅವರ ಛಾಯಾಗ್ರಹಣವಿದೆ. ಚಿತ್ರವು 19 ಅಕ್ಟೋಬರ್ 2012 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಿತು == ಪಾತ್ರವರ್ಗ == ಕೃಷ್ಣನಾಗಿ ಗಣೇಶ್ ರುಕ್ಮಿಣಿಯಾಗಿ ಪ್ರಣಿತಾ ಸುಭಾಷ್ ರಂಗಣ್ಣನಾಗಿ ರಂಗಾಯಣ ರಘು ಸಾಧು ಕೋಕಿಲ ಚಿಕ್ಕಣ್ಣ == ವಿಮರ್ಶೆಗಳು == ಮಿಸ್ಟರ್ 420 ಬಿಡುಗಡೆಯಾದ ನಂತರ ವಿಮರ್ಶಕರಿಂದ ಸಾಧಾರಣದಿಂದ ನಕಾರಾತ್ಮಕವರೆಗಿನ ವಿಮರ್ಶೆಗಳನ್ನು ಪಡೆಯಿತು. ರೆಡಿಫ್ ಚಿತ್ರಕ್ಕೆ 2.5/5 ರೇಟಿಂಗ್ ನೀಡಿ "ಚಿತ್ರವು ಸಮಯ ಕಳೆಯುವುದಕ್ಕಾಗಿ ಮತ್ತು ಸ್ವಲ್ಪ ಮನರಂಜನೆಗಾಗಿ ನೋಡುತ್ತಿರುವವರಿಗೆ ಪರವಾಗಿಲ್ಲ" ಎಂದು ಕಾಮೆಂಟ್ ಮಾಡಿದೆ. 2.5/5 ರೇಟಿಂಗ್‌ನೊಂದಿಗೆ ಚಿತ್ರಕ್ಕೆ ಋಣಾತ್ಮಕ ವಿಮರ್ಶೆಯನ್ನು ನೀಡಿದ ಟೈಮ್ಸ್ ಆಫ್ ಇಂಡಿಯಾ "ಇದು ಹಳ್ಳಿ ಹುಡುಗನೊಬ್ಬ ನಗರದಲ್ಲಿ ಮಿಸ್ಟರ್ 420ಯಾಗಿ ಹೇಗೆ ಬದಲಾಗುತ್ತಾನೆ ಎಂಬುದರ ಮೇಲೂ ಮತ್ತು ಅವನ ಮುಜುಗರದ ಕ್ಷಣಗಳ ಮೇಲೂ ಕೇಂದ್ರೀಕರಿಸುವ ಸಿಲ್ಲಿ ಸೀಕ್ವೆನ್ಸ್‌ಗಳೊಂದಿಗೆ ಟೈಮ್ ಪಾಸ್ ಚಲನಚಿತ್ರವಾಗಿದೆ" ಎಂದು ಉಲ್ಲೇಖಿಸಿದೆ. ಚಿತ್ರಕ್ಕೆ 1.5/5 ರೇಟಿಂಗ್ ನೀಡಿತು ಮತ್ತು "ಈ ಮಿಸ್ಟರ್ 420 ನಿಮ್ಮ ಜೇಬಿನಲ್ಲಿ ತೂತು ಮಾಡಲು ಬಿಡಬೇಡಿ, !" ಎಂದು ಎಚ್ಚರಿಸಿತು == ಧ್ವನಿಮುದ್ರಿಕೆ == ಜಯಂತ್ ಕಾಯ್ಕಿಣಿಯವರ ಸಾಹಿತ್ಯಕ್ಕೆ ವಿ.ಹರಿಕೃಷ್ಣ 5 ಹಾಡುಗಳನ್ನು ರಚಿಸಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಮಿಸ್ಟರ್ 420 @ ಐ ಎಮ್ ಡಿ ಬಿ